ಶ್ರದ್ದಾ ಕಪೂರ್ (ಜನನ ೩ ಮಾರ್ಚ್ ೧೯೮೭) ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ ಮತ್ತು ಗಾಯಕಿ . ಇವರು ನಟ ಶಕ್ತಿ ಕಪೂರ್ ರವರ ಪುತ್ರಿ . ೨೦೧೦ ರ ತೀನ್ ಪತ್ತಿ ಎಂಬ ಸಿನಿಮಾದಿಂದ ಇವರು ತನ್ನ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು . ಹಾಗೂ ೨೦೧೧ ರ ಲವ್ ಕಾ ದಿ ಎಂಡ್ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ನಟಿಸಿದ್ದಾರೆ. ೨೦೧೩ ರ ಆಶಿಕಿ ೨ ಎಂಬ ಸಿನಿಮಾದಲ್ಲಿ ಅವರ ಯಶಸ್ಸನ್ನು ಗುರುತಿಸಿ ಫಿಲ್ಮಫೇರ್ ಅವಾರ್ಡ್ - ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನವನ್ನು ಪಡೆದರು. ನಂತರದ ವರ್ಷದಲ್ಲಿ ವಿಲಿಯಂ ಷೇಕ್ಸ್‌ಪಿಯರ್ನ ಹ್ಯಾಮ್ಲೆಟ್ ನಾಟಕವನ್ನು ರೂಪಾಂತರಿಸಿದ ವಿಶಾಲ್ ಭಾರದ್ವಾಜ್ ರವರ ಹೈದರ್ ಎಂಬ ಸಿನಿಮಾದಲ್ಲಿ ಒಫೇಲಿಯಾ ವನ್ನು ಆಧಾರಿಸಿ ಅಭಿನಯಿಸಿದ್ದಾರೆ. ಹಾಗೂ ೨೦೧೪ ರ ಏಕ್ ವಿಲನ್ ಸಿನಿಮಾ, ೨೦೧೫ ರ ಎಬಿಸಿಡಿ ೨ ಸಿನಿಮಾ, ೨೦೧೬ ರ ಬಾಘಿ ಸಿನಿಮಾ , ೨೦೧೮ ರ (ಕಾಮಿಡಿ-ಹಾರರ್) ಸ್ತ್ರೀ ಸಿನಿಮಾದಲ್ಲಿ ನಟಿಸುವುದರ ಮೂಲಕ ಇವರು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವುದರ ಜೊತೆಗೆ ಇವರು ಹಲವಾರು ಚಿತ್ರಗೀತೆಗಳನ್ನು ಹಾಡಿದ್ದಾರೆ . == ಜನನ == ಶ್ರದ್ದಾ ಕಪೂರ್ ರವರು ೩ ಮಾರ್ಚ್ ೧೯೮೭ ರಂದು ಮಹಾರಾಷ್ಟ್ರದ ಮೋಬೈ ನಲ್ಲಿ ಜನಿಸಿದರು. ಅವರ ತಂದೆ ಶಕ್ತಿ ಕಪೂರ್ ರವರೊಬ್ಬ ಬಾಲಿವುಡ್ ನಟ. == ಆರಂಭಿಕ ಜೀವನ , ಶಿಕ್ಷಣ == ಇವರ ತಂದೆಯ ಕಡೆಯಿಂದ, ಶ್ರದ್ದಾ ಪಂಜಾಬಿ ಮೂಲದವರು ಮತ್ತು ತಾಯಿಯ ಕಡೆಯಿಂದ,ಇವರು ಮರಾಠಿ ಮತ್ತು ಕೊಂಕಣಿ ಸಂತತಿಯವರು. ದಿ ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ಶ್ರದ್ದಾ ತನ್ನ ತಾಯಿಯ ಸಂಬಂಧಿಕರು ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದಂತೆ ಮರಾಠಿ ಮೂಲದವರಾಗಿ ಬೆಳೆದಿದ್ದಾರೆ ಎಂದು ಬಹಿರಂಗಪಡಿಸಿದರು. ಕಪೂರ್ ರವರ ಕುಟುಂಬ ಸದಸ್ಯರಲ್ಲಿ ಅವರ ತಂದೆ ಶಕ್ತಿ ಕಪೂರ್ ಮತ್ತು ತಾಯಿ ಶಿವಾಂಗಿ ಕಪೂರ್, ಅವರ ಹಿರಿಯ ಸಹೋದರ ಸಿದ್ದಾಂತ್ ಕಪೂರ್, ಅವರ ಇಬ್ಬರು ಅತ್ತೆ ಪದ್ಮಿನಿ ಕೊಲ್ಹಾಪುರೆ ಮತ್ತು ತೇಜಸ್ವಿನಿ ಕೊಲ್ಹಾಪುರೆ ಎಲ್ಲರೂ ಭಾರತೀಯ ಚಿತ್ರರಂಗದ ನಟರು. ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಮೀನಾ ಖಾದಿಕರ್, ಉಷಾ ಮಂಗೇಶ್ಕರ್ ಮತ್ತು ಹೃದಯನಾಥ್ ಮಂಗೇಶ್ಕರ್ ಇವರೆಲ್ಲರಿಗೂ ಶ್ರದ್ದಾ ಸಂಬಂಧದಲ್ಲಿ ಸೋದರ ಸೊಸೆಯಾಗುತ್ತಾಳೆ . ನಟರ ಕುಟುಂಬದಿಂದ ಬಂದ ಶ್ರದ್ದಾ ಚಿಕ್ಕ ವಯಸ್ಸಿನಿಂದಲೂ ನಟಿಯಾಗಲು ಬಯಸಿದ್ದರು. ಇವರು ಬಾಲ್ಯದಲ್ಲಿ ತನ್ನ ತಂದೆಯೊಂದಿಗೆ ವಿವಿಧ ಶೂಟಿಂಗ್ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಕಪೂರ್ ರವರು ಜಮ್ನಾಬಾಯಿ ನರ್ಸೀ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಪಡೆದರು ಮತ್ತು ೧೫ ನೇ ವಯಸ್ಸಿನಲ್ಲಿ ಅವರು ಅಮೇರಿಕನ್ ಸ್ಕೂಲ್ ಆಫ್ ಬಾಂಬೆ ಗೆ ಸ್ಥಳಾಂತರಗೊಂಡರು. ನಂತರ ಇವರು ಬಾಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಶ್ರದ್ದಾ ಕಪೂರ್ ರವರ ೧೬ ನೇ ವಯಸ್ಸಿನಲ್ಲಿದ್ದಾಗಲೇ ಅವರ ಶಾಲಾ ಪ್ರದರ್ಶನಗಳನ್ನು ನೋಡಿದ ಸಲ್ಮಾನ್ ಖಾನ್ ರವರು ಅವರನ್ನು ಸಿನಿಮಾದಲ್ಲಿ ನಟಿಸಲು ಕರೆದಿದ್ದರು. ಆದರೆ ಮನಶ್ಶಾಸ್ತ್ರಜ್ಞೆ ಆಗಲು ಬಯಸಿದ ಇವರು ಆ ಪ್ರಸ್ತಾಪವನ್ನು ನಿರಾಕರಿಸಿದ್ದರು. ತನ್ನ ಅಜ್ಜ ಮತ್ತು ಅಮ್ಮ ಶಾಸ್ತ್ರೀಯ ಸಂಗೀತಗಾರರು ಆಗಿದ್ದರಿಂದ ಶ್ರದ್ದಾ ರವರು ಗಾಯನದಲ್ಲಿ ಬಾಲ್ಯದಿಂದಲೇ ತರಬೇತಿಯನ್ನು ಪಡೆದಿದ್ದರು. == ಫಿಲ್ಮೋಗ್ರಾಫಿ == == ಡಿಸ್ಕೋಗ್ರಾಫಿ == == ನಾಮನಿರ್ದೇಶನ ಮತ್ತು ಪ್ರಶಸ್ತಿಗಳು == == ಗ್ಯಾಲರಿ == == ಉಲ್ಲೇಖಗಳು ==